VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಸಂಪನ್ಮೂಲ ಕೇಂದ್ರ

ಸಮನ್ವಯತೆಯ ಅಭಿವೃದ್ಧಿ ಮತ್ತು ಸಮನ್ವಯ ಶಿಕ್ಷಣದ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ

ಸಮನ್ವಯತೆಯ ಅಭಿವೃದ್ಧಿ ಮೂಲಕ ಸಮನ್ವಯ ಸಮಾಜವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಭಾರತ ಕಾರ್ಯಾನ್ಮುಖವಾಗಿದೆ. ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮತ್ತು ಸಮಗ್ರ ಸಮನ್ವಯತೆಯ ಅಭಿವೃದ್ಧಿಯ ಫಲವನ್ನು ಅನುಭವಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ನೀತಿಯ ವಿಶೇಷ ಚೇತನ ವ್ಯಕ್ತಿಗಳನ್ನು ದೇಶದ ಸಂಪನ್ಮೂಲಗಳೆಂದು ಗುರುತಿಸಿದ್ದು, ಅವರಿಗೆ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಸಾಮಾಜಿಕ ಭಾಗವಹಿಸುವಿಕೆಯ ವಾತಾವರಣವನ್ನು ಸೃಷ್ಟಿಸಲು ಸೂಚಿಸಿದೆ. ಹಾಗೆಯೇ ಭಾರತದ 11 ಮತ್ತು 12ನೇ ವಾರ್ಷಿಕ ಯೋಜನೆಯು ಸಹ ವಿಶೇಷ ಚೇತನ ವಿದ್ಯಾರ್ಥಿಗಳಿಗೆ, ಅವಕಾಶ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಸಂಯೋಜಿತ ಕಾಲೇಜುಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ. 

ಈ ನಿಟ್ಟಿನಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯವು ದಕ್ಷಿಣ ಏಷ್ಯಾದಲ್ಲಿ ಹೆಸರುವಾಸಿಯಾಗಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ/ಸಂಯೋಜಿತ ಶಿಕ್ಷಣದ ರುವರಿಯಾಗಿ ಕಾರ್ಯನಿರ್ವಹಿಸುತ್ತಿರುವ CBR Network ಸಂಸ್ಥೆಯ ಸಹಯೋಗದೊಂದಿಗೆ, ಸಮನ್ವಯತೆಯ  ಅಭಿವೃದ್ಧಿ ಮತ್ತು ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿದೆ. ಈ ಸಂಪನ್ಮೂಲ ಕೇಂದ್ರವು ಡಿಜಿಟಲ್/ಅಂಕೀಯ ಗ್ರಂಥಾಲಯ, ವರ್ಚುವಲ್ ತರಗತಿ ಉಪನ್ಯಾಸದ ಸಿಡಿಗಳು ಸಮನ್ವಯ ಶಿಕ್ಷಣದ ಬಹುಮಾಧ್ಯಮ ಕಲಿಕಾ ಸಾಮಾಗ್ರಿಗಳನ್ನು ಹೊಂದಿದೆ. ನಿಯತಕಾಲಿಕಗಳು ಮತ್ತು ಇ-ಕಲಿಕಾ ಸಾಮಗ್ರಿಗಳೊಂದಿಗೆ ಸುಸಜ್ಜಿತವಾಗಿದೆ. 

ಉದ್ದೇಶಗಳು

  1. ಸಮನ್ವಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಂಪನ್ಮೂಲ ಪುಸ್ತಕಗಳು ಮತ್ತು ಉತ್ತಮ ಗುಣಮಟ್ಟದ ಸಾಮಗ್ರಿಗಳೊಂದಿಗೆ ಹೆಚ್ಚಿನ ಸಂಪನ್ಮೂಲ ಕೇಂದ್ರಗಳ ಅಭಿವೃದ್ಧಿಪಡಿಸುವುದು ಮತ್ತು ವಿಶೇಷ ಚೇತನರಿಗೆ ಪುನರ್ವಸತಿ ಕಲ್ಪಿಸುವುದು. 
  2. ಉನ್ನತ ಶಿಕ್ಷಣದಲ್ಲಿ ವಿಶೇಷ ಚೇತನರು ಮತ್ತು ಸಾಮಾಜಿಕವಾಗಿ ಹೊರಗುಳಿದಿರುವ ಗುಂಪುಗಳ ಸಾಮಾಜಿಕ ಭಾಗವಹಿಸುವಿಕೆಯನ್ನು ಬಲಪಡಿಸುವುದು. 
  3. ಅಂತರ್ಜಾಲ ಚರ್ಚೆಗಳು, ವಿಚಾರ ಸಂಕಿರಣಗಳು ಮತ್ತು ಕಾರ್ಯಾಗಾರಗಳು, ನಿಯತಕಾಲಿಕೆ ಮತ್ತು ಸುದ್ಧಿ ಪತ್ರಗಳ ಮೂಲಕ ಸಮನ್ವಯ ಶಿಕ್ಷಣ ಮತ್ತು ಸಮನ್ವಯ ಅಭಿವೃದ್ಧಿಯನ್ನು ಸಾಧಿಸುವುದು.
  4. ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ಅಸ್ತಿತ್ವದಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುವುದು ಮತ್ತು ಹೊಸ ಜ್ಞಾನದ ಅವಿಷ್ಕಾರ ಮಾಡುವುದು.

ನಮ್ಮ ಸಂಪನ್ಮೂಲ ಕೇಂದ್ರದ ಕಾರ್ಯಗಳು/ಸಾಧನೆ

  1. ಅಂತರರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಮನ್ವಯ ಶಿಕ್ಷಣದ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ.
  2. ಈ ಕೆಳಗಿನ ಕ್ಷೇತ್ರಗಳ ಅಡಿಯಲ್ಲಿ ನಮ್ಮ ಕೇಂದ್ರಕ್ಕೆ ಪುಸ್ತಕಗಳು ಮತ್ತು ವಸ್ತುಗಳನ್ನು ಸಂಗ್ರಹಿಸಲು ವಿಷಯಾಧಾರಿತವಾಗಿ ಗಮನ ನೀಡಲಾಗಿದೆ.
    1. ಸಮನ್ವಯ ಶಿಕ್ಷಣದ ಜಾಗೃತಿ
    2. ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀತಿಗಳು/ಕಾನೂನುಗಳು
    3. ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ದತ್ತಾಂಶಗಳು
    4. ಸಮನ್ವಯತೆ ಮತ್ತು ಶಿಕ್ಷಣ
    5. ಸಮನ್ವಯ ಶಿಕ್ಷಣದಲ್ಲಿ ಪಾಲ್ಗೊಳ್ಳುವಿಕೆ
    6. ಸಿ.ಬಿ.ಆರ್ ಸಮನ್ವಯತೆ ಮತ್ತು ಸಾಮಾಜಿಕ ಮುಖ್ಯ ವಾಹಿನಿಗೆ ತರುವ ತಂತ್ರಗಳು.

Enquire Us