VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ವಿದ್ಯಾರ್ಥಿ ವೇತನಗಳ ಸೌಲಭ್ಯಗಳು

ನಮ್ಮ ಸಂಸ್ಥೆಯು ಶೈಕ್ಷಣಿಕ ಅಂಶಗಳಿಗಷ್ಟೇ ಹೆಸರುವಾಸಿಯಾಗಿರದೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಆರ್ಥಿಕ ಬೆಂಬಲದ ಬಗ್ಗೆಯೂ ಕಾಳಜಿವಹಿಸುತ್ತೇವೆ..

ಬಿ.ಇಡಿ ಕೋರ್ಸಿಗೆ ಪ್ರವೇಶ ಪಡೆದ ನಮ್ಮ ವಿದ್ಯಾರ್ಥಿಗಳಲ್ಲಿ ಎಸ್ಸಿ,ಎಸ್ಟಿ – ಪರಿಶಿಷ್ಠಜಾತಿ ಮತ್ತು ಪಂಗಡಕ್ಕೆ ಸೇರಿದ ೨,೫೦೦೦೦ ಕ್ಕಿಂತ ಕಡೆಮೆ ವಾರ್ಷಿಕ ಆದಾಯವನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ. ವಿದ್ಯಾರ್ಥಿ ವೇತನ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

 ಹಾಗೆಯೇ ಹಿಂದುಳಿದ ವರ್ಗಗಳಾದ ಪ್ರ.ವರ್ಗ-1, 2, 2ಬಿ, 3 ಮತ್ತು 3ಬಿ ಪ್ರರ್ಗಗಳಿಗೆ ಸೇರಿದ ವಾರ್ಷಿಕ ಆದಾಯ 10,000ಕ್ಕಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ದೊರೆಯುವ ವಿದ್ಯಾರ್ಥಿ ವೇತನ ಪಡೆಯಲು ಅವಕಾಶ ಕಲ್ಪಿಸಿ ಕೊಡಲಾಗಿದೆ.

ಇದರ ಜೊತೆಗೆ ನಮ್ಮ ಆಡಳಿತ ಮಂಡಳಿಯು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಮತ್ತು ವಾರ್ಷಿಕ ಆದಾಯ 2,00,000ಕ್ಕಿಂತ ಕಡಿಮೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್ ವಿದ್ಯಾರ್ಥಿ ವೇತನವನ್ನು ಪ್ರಾಯೋಜಿಸುತ್ತಿದೆ.

ಅಷ್ಟೇ ಅಲ್ಲದೆ ಬಿ.ಇಡಿ ಪದವಿ ಮುಗಿಸಿದ ವಿದ್ಯಾರ್ಥಿಗಳಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದತ್ತಿ ಬಹುಮಾನಗಳನ್ನು ಸಹ ನೀಡಲಾಗುತ್ತದೆ

ನಮ್ಮ ಕಾಲೇಜು ರೋಟರಿಕ್ಲಬ್, ವಿದ್ಯಾ ವಿಸ್ತಾರ ಟ್ರಸ್ಟ್, ತಿರುಪುರಂ ಫೌಂಡೇಶನ್ ಮುಂತಾದ NGOಗಳೊಂದಿಗೆ ಗೌರವಾನ್ವಿತ ಸಹಯೋಗವನ್ನು ಹೊಂದಿದೆ. ಆರ್ಥಿಕವಾಗಿ & ಸಾಮಾಜಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪ್ರಾಯೋಜಿಸುತ್ತೇವೆ. ಸುಮಾರು 5 ವರ್ಷಗಳಿಂದ ನಮ್ಮ ಸಂಸ್ಥೆಯ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದ ಫಲಾನುಭವಿಗಳಾಗಿದ್ದಾರೆ. ಭವಿಷ್ಯದಲ್ಲಿಯೂ ಯೋಜನೆ ಮುಂದುವರೆಯುವ ಆಶಯವನ್ನು ಹೊಂದಿದ್ದೇವೆ.

Enquire Us