ಶಿಕ್ಷಕರಾಗಬೇಕೆಂದು ತೀರ್ಮಾನಿಸಿ ತರಬೇತಿಯನ್ನು ಬಯಸುವ ಪ್ರತಿಯೊಬ್ಬರಿಗೂ ವಿಜಯ ಶಿಕ್ಷಕರ ಮಹಾವಿದ್ಯಾಲಯವೇ ಮುಖ್ಯವಾದ ಆಯ್ಕೆಯಾಗಿರುತ್ತದೆ ಎಂಬುದು ನಮ್ಮ ನಂಬಿಕೆ. ಆದರ್ಶ ಶಿಕ್ಷಕರಾಗಬೇಕೆಂದು ಬಯಸುವ ನಿಮ್ಮ ಮಹದಾಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಾದ ಬದ್ಧತೆಯುಳ್ಳ ಮತ್ತು ಸಬಲ ಶಿಕ್ಷಕರನ್ನು ರೂಪುಗೊಳಿಸುವಲ್ಲಿ ನಮ್ಮ ವಿಜಯ ಶಿಕ್ಷಕರ ಮಹಾವಿದ್ಯಾಲಯವು ಹೆಸರುವಾಸಿಯಾಗಿದೆ.
೧೯೬೦ರಲ್ಲಿ ಸ್ಥಾಪನೆಯಾದ ವಿಜಯ ಶಿಕ್ಷಕರ ಮಹಾವಿದ್ಯಾಲಯವು ಬಿ.ಇಡಿ ಶಿಕ್ಷಣವನ್ನು ನೀಡುವ ಅನುದಾನಿತ ಸಂಸ್ಥೆಯಾಗಿದೆ. ನ್ಯಾಕ್ ಸಂಸ್ಥೆಯಿಂದ ಮಾನ್ಯತೆಯನ್ನು ಹೊಂದಿರುವ ವಿಜಯ ಶಿಕ್ಷಕರ ಮಹಾವಿದ್ಯಾಲಯವು ಸದ್ಯದಲ್ಲಿಯೇ ವಜ್ರಮಹೋತ್ಸವವನ್ನು ಆಚರಿಸಲಿದೆ. ಬಿ.ಇಡಿ ಕಾರ್ಯಕ್ರಮವನ್ನು ನಡೆಸಲು ಎನ್.ಸಿ.ಟಿ.ಇ ಸೂಚಿಸಿರುವ ನಿಯಮಗಳಿಗೆ ಅನುಗುಣವಾಗಿ ಸೂಕ್ತವಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಉತ್ತಮ ಮತ್ತು ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ೨೧ನೇ ಶತಮಾನದ ಶೈಕ್ಷಣಿಕ ವ್ಯವಸ್ಥೆಗೆ ಅಗತ್ಯವಾದ ಶೈಕ್ಷಣಿಕ ತಂತ್ರಜ್ಞಾನ ಕೌಶಲ್ಯಗಳನ್ನು ಒಳಗೊಂಡಂತೆ ವೈವಿಧ್ಯಮ ಶೈಕ್ಷಣಿಕ ಅವಕಾಶಗಳನ್ನು ವಿಜಯ ಶಿಕ್ಷಕರ ಮಹಾವಿದ್ಯಾಲಯವು ಒದಗಿಸುತ್ತದೆ. ಶಿಕ್ಷಕರ ವೃತ್ತಿಯನ್ನು ಸೇರಬೇಕೆಂದು ಅಪೇಕ್ಷಿಸುವ ಪತಿಯೊಬ್ಬರಿಗೂ ವಿಜಯ ಶಿಕ್ಷಕರ ಮಹಾವಿದ್ಯಾಲಯವು ವೇದಿಕೆಯನ್ನು ಒದಗಿಸುತ್ತದೆ. ಬಿ.ಇಡಿ ತರಬೇತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿರುವ ಉತ್ತಮ ಶಾಲೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುವಲ್ಲಿ ಕಾಲೇಜಿನ “ಉದ್ಯೋಗ ಕೋಶ”ವು ಸಕ್ರಿಯವಾಗಿದೆ.
CALENDAR