VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಪಠ್ಯಕ್ರಮ ಆಧಾರಿತ ಸಂಪನ್ಮೂಲ ಕೊಠಡಿ

ಮನೋವಿಜ್ಞಾನ ಸಂಪನ್ಮೂಲ ಕೊಠಡಿ  

ಮನೋವಿಜ್ಞಾನ ಸಂಪನ್ಮೂಲ ಕೊಠಡಿ  ಬಿ.ಇಡಿ ಶಿಕ್ಷಣ ಕಾರ್ಯಕ್ರಮದ ಒಂದು ಅವಿಭಾಜ್ಯ ಅಂಗವಾಗಿದೆ. ಬಿ.ಇಡಿ ಕಾರ್ಯಕ್ರಮದ ಪಠ್ಯಕ್ರಮಕ್ಕೆ ಅನುಗುಣವಾಗಿ ಷಾಣ್ಮಾಸಿಕ ಅವಧಿಯಲ್ಲಿ ಕೈಗೊಳ್ಳಬೇಕಾದ ಪ್ರಾಯೋಗಿಕ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಪ್ರಾಯೋಗಿಕ ಸಾಧನಗಳನ್ನು ನಮ್ಮ ಕಾಲೇಜಿನ ಮನೋವಿಜ್ಞಾನ ಸಂಪನ್ಮೂಲ ಕೊಠಡಿಯು ಹೊಂದಿದೆ. ಶೈಕ್ಷಣಿಕ ವಲಯದಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳಿಗೆ ಅನುಗುಣವಾಗಿ ನಾವಿನ್ಯ ಮಾದರಿಯ ಪ್ರಯೋಗಿಕ ಸಾಧನಗಳನ್ನು ಒಳಗೊಂಡಿರುವ ಸುಸಜ್ಜಿತ ಸಂಪನ್ಮೂಲ ಕೊಠಡಿಯಾಗಿದೆ. 

ಮನೋವೈಜ್ಞಾನಿಕ ನೆಲೆಯ ಪ್ರಯೋಗಗಳನ್ನು ಕೈಗೊಳ್ಳಲು ಸಹಾಯಕವಾಗುವ ಮಾದರಿಯಲ್ಲಿ ಉತ್ತಮ ಸೌಲಭ್ಯವನ್ನು ಒಳಗೊಂಡಿರುವ ಮನೋವಿಜ್ಞಾನ ಸಂಪನ್ಮೂಲ ಕೊಠಡಿಯು ಕೇವಲ ಬಿ.ಇಡಿ ಕಾರ್ಯಕ್ರಮದ ವಿದ್ಯಾರ್ಥಿಗಳ ಪ್ರಾಯೋಗಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ, ಹೊರಗಿನ ವೃತ್ತಿಪರ ತರಬೇತುದಾರರು, ಸಂಶೋಧಕರು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಹೆಚ್ಚುವರಿ ಅಧ್ಯಯನವನ್ನು ನಡೆಸಲು ಸಹಾಯಕವಾಗುವಂಥ ಸೌಲಭ್ಯಗಳನ್ನು ಹೊಂದಿದೆ.

ತರಗತಿಯ ನೈಜ ಸನ್ನಿವೇಶಗಳ ನಿರ್ವಹಣೆ, ವಿದ್ಯಾರ್ಥಿಗಳ ಆಲೋಚನಶಕ್ತಿಯ ಲೆಕ್ಕಾಚಾರ, ದರ್ಪಣ ಪರೀಕ್ಷೆ ಮೊದಲಾದ ಅತ್ಯಾಧುನಿಕ ಸಾಧನಗಳನ್ನು ನಮ್ಮ ಸಂಪನ್ಮೂಲ ಕೊಠಡಿಯು ಹೊಂದಿದೆ.  ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನ ವಿಷಯಕ್ಕೆ ಸಂಬಂಧಿಸಿದ ದತ್ತಾಂಶವನ್ನು ಸಂಗ್ರಹ ಮಾಡಲು ಅಗತ್ಯವಾಗಿ ಬೇಕಾದ ದರ್ಜಾಮಾಪನ ಮತ್ತು ತಪಶೀಲು ಪಟ್ಟಿಗಳನ್ನು ಹೊಂದಿದೆ.  ಹೀಗೆ ಬಹುಮುಖಿ ನೆಲೆಯಲ್ಲಿ ಶೈಕ್ಷಣಿಕ ಸನ್ನಿವೇಶಕ್ಕೆ ಸಹಾಯಕವಾಗುವ ನಿಟ್ಟಿನಲ್ಲಿ ಮನೋವಿಜ್ಞಾನ ಸಂಪನ್ಮೂಲ ಕೊಠಡಿಯನ್ನು ಸಜ್ಜುಗೊಳಿಸಲಾಗಿದೆ.

ಸಮಾಜ ವಿಜ್ಞಾನ ಸಂಪನ್ಮೂಲ ಕೊಠಡಿ

ಸಮಾಜವಿಜ್ಞಾನ ಸಂಪನ್ಮೂಲ ಕೊಠಡಿಯು ಉತ್ತಮ ಮಾದರಿಯ ಕಲಿಕೆ ಮತ್ತು ಬೋಧನಾ ಉಪಕರಣಗಳನ್ನು ಹೊಂದಿದ್ದು, ಬಿ.ಇಡ್ ವಿದ್ಯಾರ್ಥಿಗಳ ಕಲಿಕೆ ಮತ್ತು ಪ್ರಯೋಗಿಕ ಚಟುವಟಿಕೆಗಳಿಗೆ ಉತ್ತಮವಾದ ಅವಕಾಶಗಳನ್ನು ಒದಗಿಸುತ್ತಿದೆ. ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ವಿಶಿಷ್ಟವಾದ ಪಠ್ಯಪುಸ್ತಕಗಳು, ಪೂರಕ ಓದಿನ ಸಾಮಗ್ರಿಗಳು, ದೃಶ್ಯಾವಳಿಗಳು, ಭೂಪಟಗಳು, ಗ್ಲೋಬ್ ಮೊದಲಾದ ವಿಭಿನ್ನ ಮಾದರಿಯ ಸಾಧನಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿ ಮೂರ್ತ ಮತ್ತು ಅನುಭವಾತ್ಮಕ ಕಲಿಕೆಯನ್ನು ಒದಗಿಸುವ ಮಾದರಿಯಲ್ಲಿ ಸಿದ್ಧಗೊಳಿಸಲಾಗಿದೆ. ವಿದ್ಯಾರ್ಥಿಗಳಿಂದಲೇ ತಯಾರಿಸಲಾದ ಸೃಜನಶೀಲ ಬೋಧನಾಪಕರಣಗಳ ಸಂಗ್ರಹವೂ ಇಲ್ಲಿದೆ. ವಿದ್ಯಾರ್ಥಿಗಳು ತಮ್ಮ ಪಾಠ ಬೋಧನೆಗೆ ಸಿದ್ಧತೆಯನ್ನು ನಡೆಸಿಕೊಳ್ಳಲು ಮತ್ತು ವಿಷಯಕ್ಕೆ ಸಂಬಂಧಿಸಿದ ಹೆಚ್ಚುವರಿ ಚರ್ಚೆಯನ್ನು ಸಂಪನ್ಮೂಲ ಕೊಠಡಿಯಲ್ಲಿ ಕೈಗೊಳ್ಳುವ ವ್ಯವಸ್ಥೆಯನ್ನು ಹೊಂದಿದೆ. ಪ್ರೌಢಶಾಲಾ ಹಂತದ ಸೇವಾಪೂರ್ವ ಮತ್ತು ಸೇವಾನಿರತ ಶಿಕ್ಷಕರಿಗೆ ತರಬೇತಿಯನ್ನು ನೀಡುವ ವ್ಯವಸ್ಥೆಯನ್ನು ಹೊಂದಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಬೇಕಾದ ಸಾಮಾಜಿಕ ಕೌಶಲ್ಯಗಳನ್ನು ಬೋಧಿಸುವ ಮತ್ತು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ಅಗತ್ಯವಾದ ಸೌಲಬ್ಯವನ್ನು ಒಳಗೊಂಡ ಸುಸಜ್ಜಿತ ಸಮಾಜ ವಿಜ್ಞಾನ ಕೊಠಡಿಯನ್ನು ನಮ್ಮ ಕಾಲೇಜು ಹೊಂದಿದೆ.

ಗಣಿತ ಸಂಪನ್ಮೂಲ ಕೊಠಡಿ

ಗಣಿತ ಬೋಧನಾಶಾಸ್ತ್ರವನ್ನು ಬೋಧಿಸುವ ಪ್ರಮುಖ ಸವಾಲೆಂದರೆ, ತಮಗೆ ಕಲಿಸಿಲ್ಲದ ರೀತಿಯಲ್ಲಿ ಕಲಿಸಲು   ಪ್ರಶಿಕ್ಷಣಾರ್ಥಿಗಳನ್ನು ಸಿದ್ಧಪಡಿಸುವುದು. ಸವಾಲನ್ನು ಎದುರಿಸಲು ಹಾಗೂ  ಪ್ರಶಿಕ್ಷಣಾರ್ಥಿಗಳ ಅಗತ್ಯತೆಗಳನ್ನು ಪೂರೈಸುವ ಉದ್ದೇಶದಿಂದ ಗಣಿತ ಬೋಧನಾಶಾಸ್ತ್ರ ಸಂಪನ್ಮೂಲ ಕೊಠಡಿಯನ್ನು ಸ್ಥಾಪಿಸಿದ್ದೇವೆ. ಸಂಪನ್ಮೂಲ ಕೋಣೆಯಲ್ಲಿ ಲಭ್ಯವಿರುವ ವಸ್ತುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದು ಅವು ಸ್ವಯಂರೂಪಿಸಿದ ನವೀನ ಚಟುವಟಿಕೆಗಳನ್ನುಕಾರ್ಯಪ್ರತಿಗಳನ್ನು, ಯೋಜನೆಗಳನ್ನು ಮತ್ತು ಬೋಧನೆಕಲಿಕಾ ಸಾಮಗ್ರಿಗಳನ್ನು ವಿನ್ಯಾಸಗೊಳಿಸಲು  ಪ್ರಶಿಕ್ಷಣಾರ್ಥಿಗಳಿಗೆ ಒಳನೋಟವನ್ನು ಒದಗಿಸುತ್ತವೆ. ಲಭ್ಯವಿರುವ ಸಾಮಗ್ರಿಗಳೊಂದಿಗೆಪ್ರಶಿಕ್ಷಣಾರ್ಥಿಗಳು ನವೀನತೆಯಿಂದ  ಆಲೋಚಿಸಲು ಪ್ರಚೋದಿಸಲ್ಪಡುತ್ತಾರೆ ಮಾತ್ರವಲ್ಲದೆ ಗಣಿತದ ಅಮೂರ್ತ ಪರಿಕಲ್ಪನೆಗಳನ್ನು ಮೂರ್ತ ಗೊಳಿಸುವ ನಿಟ್ಟಿನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಲ್ಪಡುತ್ತಾರೆ. ನಾವೀನ್ಯತೆಯಿಂದ ಲಭ್ಯವಿರುವ ವಸ್ತುಗಳನ್ನು ಪ್ರಶಿಕ್ಷಣಾರ್ಥಿಗಳಿಗೆ ಬೋಧನಾ ಅಭ್ಯಾಸದ ಸಮಯದಲ್ಲಿ ಒದಗಿಸಲಾಗುತ್ತದೆ

ಜೀವ ವಿಜ್ಞಾನ ಸಂಪನ್ಮೂಲ ಕೊಠಡಿ

ಸುಸಜ್ಜಿತ ಸಂಪನ್ಮೂಲ ಕೊಠಡಿಯು ಪ್ರಶಿಕ್ಷಕರನ್ನು ಮತ್ತು ಭಾವಿ ಶಿಕ್ಷಕರನ್ನು ಸಬಲೀಕೃತರನ್ನಾಗಿಸುತ್ತದೆ. ವಿಜಯ ಶಿಕ್ಷಕರ ಮಹಾವಿದ್ಯಾಲಯದ ಜೀವ ವಿಜ್ಞಾನ ಸಂಪನ್ಮೂಲ ಕೊಠಡಿಯು ಪ್ರಶಿಕ್ಷಣಾರ್ಥಿಗಳಿಗೆ ವಾಸ್ತವಿಕ ಅನುಭವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಜೀವ ವಿಜ್ಞಾನ ಬೋಧನ ಉದ್ದೇಶಗಳನ್ನು ಸಾಧಿಸಲು ಇದು ಅನುಕೂಲಕರವಾಗಿದ್ದು, ಪರಿಣಾಮಕಾರಿ ಜೀವ ವಿಜ್ಞಾನ ಶಿಕ್ಷಕರನ್ನು  ರೂಪಿಸಲು ಅನುವು ಮಾಡಿಕೊಡಲು ಸಹಾಯಕವಾಗುತ್ತದೆ. ಸಂಪನ್ಮೂಲ ಕೊಠಡಿಯು ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಪಾಠಯೋಜನೆಯನ್ನು ಯೋಜಿಸಲು ಮತ್ತು ವಿನ್ಯಾಸಗೊಳಿಸಿ ಬಳಸಲು ಅವಶ್ಯಕವಾಗಿರುವ ಎಲ್ಲಾ ಸಂಪನ್ಮೂಲಗಳನ್ನು ಒಳಗೊಂಡಿದೆ. ಜೀವ ವಿಜ್ಞಾನ ವಿಷಯ ಬೋಧನೆಗೆ ಅನುಕೂಲಕರ ಸಂಪನ್ಮೂಲಗಳಾದ ಚಿತ್ರಪಟಗಳು, ಮಾದರಿಗಳು, ನಮೂನೆ, ಸಲಕರಣೆ ಮತ್ತು ಇತರೆ ಸಾಧನಗಳನ್ನು ಒಳಗೊಂಡಿದ್ದು ಇದರ ಪೂರ್ಣ ಉಪಯೋಗವನ್ನು ಪ್ರಶಿಕ್ಷಣಾರ್ಥಿಗಳು ಪಡೆದು ತಮ್ಮ ಶಾಲಾ ಬೋಧನ ಸಮಯದಲ್ಲಿ ಸೃಜನಾತ್ಮಕ ಹಾಗೂ ನಾವಿನ್ಯತೆಯೊಂದಿಗೆ ತಮ್ಮ ಪಾಠ ಬೋಧನೆಗಳನ್ನು ಪ್ರಸ್ತುತಪಡಿಸಲು ಅನುಕೂಲ ಮಾಡಿಕೊಡುತ್ತದೆ.

ಭೌತ ವಿಜ್ಞಾನ ಸಂಪನ್ಮೂಲ ಕೊಠಡಿ

ಬೋಧನೆ, ಕಲಿಕೆ, ಪ್ರಯೋಗ ಮತ್ತು ಅನುಭವದ ಕಲಿಕೆ ಸೇರಿದಂತೆ ಹಲವಾರು ಸೇವೆಗಳನ್ನು ಒದಗಿಸುವ ಸ್ಥಳವೇ ಭೌತ ವಿಜ್ಞಾನ ಸಂಪನ್ಮೂಲ ಕೊಠಡಿ(ಪಿ.ಎಸ್.ಆ ರ್) ಯೊಂದಿಗಿನ ಪಾಲುದಾರಿಕೆಯೆಂದರೆ ಅದುವೆ ಅನುಭವದೊಂದಿಗಿನ ಪಾಲುದಾರಿಕೆ ಎಂದರ್ಥ. ಈ ದೃಷ್ಟಿಕೋನಕ್ಕೆ ಆಧರಿಸಿದಂತೆ, ನಮ್ಮ ಕಾಲೇಜಿನಲ್ಲಿ ಸುಸಜ್ಜಿತ ಭೌತ ವಿಜ್ಞಾನಸಂಪನ್ಮೂಲ ಕೊಠಡಿ ಇದೆ, ಈ ಸಂಪನ್ಮೂಲ ಕೊಠಡಿಯು, ಪ್ರಾಥಮಿಕ,  ಪ್ರೌಢ ಮತ್ತು ಪದವಿ ಪೂರ್ವ  ಶಿಕ್ಷಣ ಮಟ್ಟದ ಪಠ್ಯಕ್ರಮಕ್ಕೆ ಸಂಬಂಧಿಸಿದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರಿಕಲ್ಪನೆಗಳು,ತತ್ವಗಳು ಮತ್ತು ಸಿದ್ಧಾಂತಗಗಳಿಗೆ ಸಂಬಂಧಿಸಿದ ಉಪಕರಣಗಳು, ರಾಸಾಯನಿಕಗಳು, ಪ್ರಾಯೋಗಿಕ ಸಾಧನ-ಸಲಕರಣೆಗಳು ಮತ್ತು ನವೀನ, ಸುಧಾರಿತ ಮಾದರಿಗಳನ್ನು ಒಳಗೊಂಡಿದೆ.ನಮ್ಮ  ವಿದ್ಯಾರ್ಥಿಗಳಾದ ಭಾವಿ ಶಿಕ್ಷಕರು ತಮ್ಮ ಅನುಭವಕ್ಕಾಗಿ ಪ್ರಯೋಗಗಳನ್ನು ನಡೆಸಲು ಈ ಸಂಪನ್ಮೂಲ ಕೊಠಡಿಯನ್ನುಬಳಸುತ್ತಿದ್ದಾರೆ ಹಾಗೆಯೇ ತಮ್ಮ ಇಂಟರ್ನ್‌ಶಿಪ್( ಬೋಧನಾಭ್ಯಾಸ) ಸಮಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವಾಗವಾಗಲೂ ಸಹ ಈ ಸಂಪನ್ಮೂಲ ಕೊಠಡಿಯ ಸಾಮಗ್ರಿಗಳನ್ನು ಬಳಸುತ್ತಾರೆ.

English Pedagogy Resource room

English resource room is a well-equipped separate room to train student teachers in linguistics. Language resource room is a dedicated space for foreign language learning where students access audio or audio-visual materials.They allow a teacher to listen to and manage student audio, which is delivered to individual students through headsets or in isolated ‘sound booths. In Lingua Phone Laboratory, learners are given a headset to listen to the audiocassettes being played. Here distractions are minimized and a certain amount of clarity in listening is possible. The lingua phone laboratory facilities each student to sit in a room with earphones and listen to taped material on pronunciation, stress andintonation in conversations and dialogues. This helps the student teachers to develop their Listening, Speaking, Reading and Writing skills comfortably. We have 12 lingua phone kit at our English resource room. Each kit has 10 level books of manuals which help the student teachers to develop their listening, speaking, Reading and Writing skills. In the language room the students are trained to learn in a specific room by gaining proficiency regarding the learning of a new language with the active assistance of hardware and software technologies adopting both auto-instructional and classroom training. During internship, the student teachers utilise this room for preparing their teaching learning materials. In-service teachers also make use of this room for better understanding of linguistics and become proficient in the LSRW skills.

ಕನ್ನಡ ಸಂಪನ್ಮೂಲ ಕೊಠಡಿ

ವಿಜಯ ಶಿಕ್ಷಕರ ಮಹಾವಿದ್ಯಾಲಯವು ಸುಸಜ್ಜಿತ ಕನ್ನಡ ವಿಷಯಾಧಾರಿತ ಬೋಧನಾಶಾಸ್ತ್ರ ಸಂಪನ್ಮೂಲ ಕೊಠಡಿಯನ್ನು ಒಳಗೊಂಡಿದೆ. ಪ್ರಶಿಕ್ಷಣಾರ್ಥಿಗಳು ಭಾಷಾ ಕೌಶಲ್ಯಗಳಾದ ಆಲಿಸುವಿಕೆ, ಮಾತುಗಾರಿಕೆ, ಓದುಗಾರಿಕೆ ಹಾಗೂ ಬರವಣಿಗೆಯನ್ನು ವೃದ್ಧಿಸಿಕೊಳ್ಳುವುದು ಅತೀ ಅವಶ್ಯಕವಾದ್ದರಿಂದ ಇವುಗಳಿಗೆ ಅನುಕೂಲವಾಗುವ ಸಂಪನ್ಮೂಲಗಳನ್ನು ಇಲ್ಲಿಒದಗಿಸಲಾಗಿದೆ. ಭಾಷಾ ಪ್ರಶಿಕ್ಷಣಾರ್ಥಿಗಳ ಜ್ಞಾನ, ಕೌಶಲ್ಯವನ್ನು ವೃದ್ಧಿಸಲು ಮತ್ತು ಸೃಜನಶೀಲತೆಯನ್ನು ಹೊರಗೆಡವಲು ಅಗತ್ಯವಾದ ಪರಿಸರವನ್ನು ಇಲ್ಲಿ ಸೃಷ್ಟಿಸಲಾಗಿದೆ. ಒಂದು ಬಾರಿಗೆ ಹತ್ತರಿಂದ ಹನ್ನೊಂದು ವಿದ್ಯಾರ್ಥಿಗಳು ಭಾಷಾ ಸಂಪನ್ಮೂಲ ಕೊಠಡಿಯನ್ನು ಸದುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಪ್ರಶಿಕ್ಷಣಾರ್ಥಿಗಳ ಅವಶ್ಯಕತೆಗೆ ತಕ್ಕಂತೆ ಭಾಷಾ ಸಂಪನ್ಮೂಲ ಕೊಠಡಿಯ ಪೀಠೋಪಕರಣದ ವಿನ್ಯಾಸವನ್ನು ಮಾಡಿಕೊಳ್ಳಲು ಅವಕಾಶವಿದೆ. ವರ್ಣಮಾಲೆಯಿಂದ ಪ್ರಾರಂಭವಾಗಿ ವಾಕ್ಯರಚನೆಯವರೆಗೆ ಹಾಗೂ ಪದಗಳಿಂದ ಪ್ರಾರಂಭವಾಗಿ ಪ್ರಬಂಧರಚನೆಯವರೆಗೂಕಲಿಯಲು ಮತ್ತು ಕಲಿಸಲು ಉಪಯುಕ್ತವಾದ ಮಾಹಿತಿ ಮತ್ತು ಪರಿಕರಗಳನ್ನು ಒಳಗೊಂಡ ಭಾಷಾ ಸಂಪನ್ಮೂಲ ಕೊಠಡಿ ಇದಾಗಿದೆ. ಭಾವಿ ಶಿಕ್ಷಕರಾಗಲು ಸಮಂಜಸವಾದ ಭಾಷಾ ಉಚ್ಚರಣೆ ಮತ್ತು ಸಂವಹನ ಕೌಶಲಗಳನ್ನು ಬೆಳೆಸುವ ನಿಟ್ಟಿನಲ್ಲಿ ಕನ್ನಡ ಭಾಷಾ ಸಂಪನ್ಮೂಲ ಕೊಠಡಿಯನ್ನು ವಿನ್ಯಾಸಗೊಳಿಸಲಾಗಿದೆ. ಭಾಷಾ ಕೌಶಲಗಳ ಅಭಿವೃದ್ಧಿಗೆ ಪೂರಕವಾದ ಚಟುವಟಿಕೆ ಮತ್ತು ಅಭ್ಯಾಸಕ್ಕೆ ಯೋಗ್ಯವಾದ ಸೌಲಭ್ಯವನ್ನುಇಲ್ಲಿ ಕಲ್ಪಿಸಲಾಗಿದೆ ಹಾಗೂ ಕೌಶಲಗಳ ಕರಗತಕ್ಕೆಅವಶ್ಯಕವಾದ ಧ್ವನಿ ಸುರುಳಿ ಕ್ಯಾಸೆಟ್ಗಳು ಮತ್ತು ಸಾಂದ್ರಿಕೆಗಳನ್ನು ಒಳಗೊಂಡಿದೆ. ಪರಿಣಾಮಕಾರಿ ಭಾಷಾ ಶಿಕ್ಷಕನಾಗಲು ಅಗತ್ಯವಾದ ವಿವಿಧ ಬೋಧನೋಪಕರಣಗಳ ಮಾದರಿ ಮತ್ತುಅದರ ತಯಾರಿಕೆ ಬೇಕಾದ ವಸ್ತುಗಳು ಸಹ ಇಲ್ಲಿ ಲಭ್ಯವಿದೆಪ್ರಶಿಕ್ಷಣಾರ್ಥಿಗಳು ಇದರ ಸಂಪೂರ್ಣ ಉಪಯೋಗ ಪಡೆದು ಪರಿಣಾಮಕಾರಿ ಭಾಷಾ ಶಿಕ್ಷಕರಾಗಲು ಇದೊಂದು ಉತ್ತಮ ವೇದಿಕೆಯಾಗಿದೆ.

Enquire Us