VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಹಿರಿಯ ವಿದ್ಯಾರ್ಥಿ ಸಂಘ

ವಿಜಯ ಶಿಕ್ಷಕರ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘವು 1970ರಲ್ಲಿ ಅಸ್ತಿತ್ವಕ್ಕೆ ಬಂದಿತು. ಇದು ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಡುವಿನ ಬಾಂಧವ್ಯ ಬಲಪಡಿಸುವ ಮುಖ್ಯ ಉದ್ದೇಶದೊಂದಿಗೆ ಹಾಗೂ ಕಾಲೇಜು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವೆ ಸಹಜೀವನದ ಸಂಬಂಧವನ್ನು ಕಾಪಾಡುವ ಸಕ್ರಿಯ ಜಾಲವನ್ನು ರಚಿಸುವ ದೃಷ್ಟಿಯೊಂದಿಗೆ ಸ್ಥಾಪಿತವಾಯಿತು.
ಧ್ಯೇಯ:

  • ಹಿರಿಯ ವಿದ್ಯಾರ್ಥಿಗಳೊಂದಿಗೆ ನಿರಂತರ ಸಂವಹನ ನಡೆಸಲು ಅನುಕೂಲ ಮಾಡಿಕೊಡುವುದು.
  • ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಶೈಕ್ಷಣಿಕ ಬೆಂಬಲದ ಕಾರ್ಯವಿಧಾನವನ್ನು ಬೆಂಬಲಿಸುವುದು.
  •  ಹಿರಿಯ ವಿದ್ಯಾರ್ಥಿಗಳೊಂದಿಗೆ ಆರೋಗ್ಯಕರ ಮತ್ತು ಸುಸ್ಥಿರ ಸಂಬಂಧವನ್ನು ಕಾಪಾಡುವುದು.

ವಿಜಯ ಶಿಕ್ಷಕರ ಮಹಾವಿದ್ಯಾಲಯವು ಹಿರಿಯ ವಿದ್ಯಾರ್ಥಿಗಳನ್ನು ಬೋಧನಾ ಜಗತ್ತಿನ ರಾಯಭಾರಿಗಳಾಗಿ ಮಾಡುವುದಲ್ಲದೆ ಮಾಧ್ಯಮಿಕ ಮಟ್ಟದ ಶಿಕ್ಷಣದಲ್ಲಿ ಉತ್ಕೃಷ್ಠತೆಯನ್ನು ಸಾಧಿಸುತ್ತದೆ. ವಿಜಯ ಶಿಕ್ಷಕರ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳ ಸಂಘವು ಕಳೆದ ನಲವತ್ತು ವರ್ಷಗಳಿಂದ ಹಲವಾರು ಶೈಕ್ಷಣಿಕ ಮತ್ತು ಶೈಕ್ಷಣಿಕೇತರ ಚಟುವಟಿಕೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕ್ರಿಯಾತ್ಮಕವಾಗಿ ಆಯೋಜಿಸಿ ನಿರ್ವಹಿಸುತ್ತಿದೆ.

ತಾತ್ವಿಕ, ಮಾನಸಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಜನವರಿ ೭ನೆ ತಾರೀಖಿನಂದು ಪ್ರೊ.ಬಿ.ಎಸ್.ಸತ್ಯನಾರಾಯಣ ಸ್ಮಾರಕ ಉಪನ್ಯಾಸವನ್ನು ಪ್ರತಿವರ್ಷವು ಆಯೋಜಿಸಲಾಗುತ್ತದೆ. ಉಪನ್ಯಾಸವನ್ನು ನೀಡಿದ ಪ್ರಖ್ಯಾತ ಮತ್ತು ಶಿಕ್ಷಣ ತಜ್ಞರೆಂದರೆ, ದಿವಂಗತ ಡಾ.ಟಿ.ಕೆ.ಜಯಲಕ್ಷ್ಮಿ, ಡಾ.ಗುರುರಾಜ್ ಕರ್ಜಗಿ, ಡಾ. ಅನಂತಪದ್ಮನಾಭ ರಾವ್, ಪ್ರೊ. ರೋಹಿಡೇಕರ್, ಶ್ರೀಮತಿ ರಾಧಾ ನಾಗರಾಜ್.

ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳ ಕಿರೀಟವೆಂದರೆ ಅಂತರ ಕಾಲೇಜು ಸಂಗೀತ ಸ್ಪರ್ಧೆ. ಈ ಸ್ಪರ್ಧೆಯನ್ನು ಪ್ರತಿವರ್ಷವು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತದೆ. ಇದು ಬೆಂಗಳೂರಿನಲ್ಲಿ ನಡೆಯುವ ಏಕೈಕ ಅನನ್ಯ ಸಂಗೀತ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯು ಈ ಕೆಳಗಿನ ಅಧಿವೇಶನಗಳನ್ನು ಹೊಂದಿದೆ.

ಶಾಸ್ತ್ರೀಯ ಸಂಗೀತ ಸ್ಪರ್ಧೆ:

ಅ. ಗಾಯನ
ಆ. ವಾದ್ಯೋಪಕರಣ(ತಾಳವಾದ್ಯ, ತಂತಿವಾದ ಮತ್ತು sಸುಷಿರವಾದ)

ಲಘು ಸಂಗೀತ ಸ್ಪರ್ಧೆ(ಭಾವಗೀತೆ-ಏಕವ್ಯಕ್ತಿ, ಜಾನಪದಗೀತೆ-ಸಮೂಹ) ಈ ಸ್ಪರ್ಧೆಯ ಪ್ರಮುಖ ಆಕರ್ಷಣೆಯೆಂದರೆ `ರೋಲಿಂಗ್ ಟ್ರೋಫಿ’, ಇದು ನಾಟ್ಯ ಸರಸ್ವತಿಯ ವಿಗ್ರಹವನ್ನು ಒಳಗೊಂಡಿದೆ. ನಾಟ್ಯ ಸರಸ್ವತಿಯನ್ನು ವಿದ್ಯಾರ್ಥಿಗಳ ವಿವಿಧ ಸಂಗೀತ ಸೃಜನಶೀಲ ಪ್ರತಿಭೆಯನ್ನು ಪ್ರತಿನಿಧಿಸಲು ರಚಿಸಲಾಗಿದೆ. ಈ ಸಂಗೀತ ಸ್ಪರ್ಧೆ ಮತ್ತು ರೋಲಿಂಗ್ ಟ್ರೋಪಿಯ ಪರಿಕಲ್ಪನೆಯನ್ನು 1977ರಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರಾದ ಮಹಾನ್ ಶಿಕ್ಷಣ ತಜ್ಞ ಮತ್ತು ಸಂಗೀತಗಾರರಾದ ಪ್ರೊ.ಜಿ.ಆರ್.ಎಸ್. ರಾಘವಾಚಾರ್ ಅವರ ಗೌರವಾರ್ಥವಾಗಿ ರೂಪಿಸಿ ಸ್ಥಾಪಿಸಲಾಯಿತು.

ವಿಜಯ ಶಿಕ್ಷಕರ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಬೋಧನಾ ಸಮುದಾಯದಲ್ಲಿ ಶ್ರೇಷ್ಠತೆ ಮತ್ತು ಹಿರಿಮೆಯನ್ನು ಪ್ರತಿಬಿಂಬಿಸಿದ್ದಾರೆ. ಅವರು ಈ ಕ್ಷೇತ್ರದಲ್ಲಿ ವ್ಯಾಪಕವಾಗಿ ತಮ್ಮ ಶ್ರೇಷ್ಟತೆಯನ್ನು ವಿಸ್ತರಿಸಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಕೆಲವರೆಂದರೆ,

Eminent Alumni

Alumni Office & Executive Members

Enquire Us