ವಿಜಯ ಶಿಕ್ಷಕರ ಮಹಾವಿದ್ಯಾಲಯದ ಬಗ್ಗೆ:
1960ರಲ್ಲಿ ಸ್ಥಾಪನೆಯಾದ ವಿಜಯ ಶಿಕ್ಷಕರ ಮಹಾವಿದ್ಯಾಲಯ ಬೆಂಗಳೂರಿನ ಜಯನಗರದ ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆ ನಡೆಸುತಿರುವ 17 ಸಂಶ್ಥೆಗಳಲ್ಲಿ ಇದು ಒಂದು. ಈ ವಿಜಯ ಶಿಕ್ಷಕರ ಮಹಾವಿದ್ಯಾಲಯ ಬೆಂಗಳೂರಿನ ಜಯನಗರದ 4ನೇ ಬ್ಲಾಕ್ ನಲ್ಲಿದೆ ಇದು ಮುಖ್ಯ ಬಸ್ ನಿಲ್ದಾಣ ಮತ್ತು ನಗರ ರೈಲ್ವೆ ನಿಲ್ದಾಣದಿಂದ ಮಾತ್ರವಲ್ಲದೇ ನಗರದ ವಿವಿಧ ಭಾಗಗಳಿಂದಳೂ ಸುಲಭ ಸಂಪರ್ಕ ಹೊಂದಿದೆ. ಓಅಖಿಇ(ಎಸ್.ಸಿ.ಟಿ.ಇ) 2014ರ ನಿಯಮಾವಳಿಗಳ ಪ್ರಕಾರ ಪೂರ್ಣ ಪ್ರಮಾಣದ ಉತ್ತಮ ಅರ್ಹ ಮತ್ತು ಅನುಭವಿ ಅಧ್ಯಾಪಕರನ್ನು ಹೊಂದಿವೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ಅಗತ್ಯವಿರುವ ಎಲ್ಲಾ ಭೌತಿಕ ಸೌಲಭ್ಯಗಳೊಂದಿಗೆ ವಿಶಾಲವಾದ ಕಟ್ಟಡವಿದೆ. ಕಾಲೇಜಿನ ಆಡಳಿತ ಮಂಡಳಿಯ ನಿರ್ವಹಣೆ ಅಡಿಯಲ್ಲಿ ಎರಡು ಮಾದರಿ ಶಾಲೆಗಳಿವೆ. ಬೋಧನಾ ಅಭ್ಯಾಸ ನಡೆಸಲು 10-15 ಪ್ರೌಢ ಶಾಲೆಗಳೊಂದಿಗೆ ಉತ್ತಮ ಸಂಪರ್ಕವಿದೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರವು ವಿಜಯ ಶಿಕ್ಷಕರ ಕಾಲೇಜನ್ನು 1997ರಲ್ಲಿ “ಶಿಕ್ಷಕರ ಶಿಕ್ಷಣ ಕಾಲೇಜು” ಎಂದು ನವೀಕರಿಸಿತು. ಅಂದಿನಿಂಧ ಕಾಲೇಜು ಪ್ರೌಢ ಶಾಲಾ ಶಿಕ್ಷಕರಿಗೆ ಸೇವಾನಿರತ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಈ ಕಾರ್ಯಕ್ರಮಗಳಿಗೆ ಸರ್ಕಾರವು ಹಣಕಾಸು ಒದಗಿಸುತ್ತದೆ. ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸೇವಾನಿರತ ಶಿಕ್ಷರಿಗೆ ಕಾಲೇಜು ಆಡಳಿತ ಮಂಡಳಿಯು ವಸತಿ ಸೌಕರ್ಯಗಳನ್ನು ಒದಗಿಸಿದೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ರಾಮನಗರ ಮತ್ತು ಕೋಲಾರ ಜಿಲ್ಲೆಯ ವಿವಿಧ ಶಾಲೆಗಳಿಂದ ವಿವಿಧ ವಿಷಯಗಳಗೆ ಸಂಬಂಧಿಸಿಗಂತೆ ಈವರೆಗೆ 5000 ಶಿಕ್ಷಕರು ಸೇವಾನಿರತ ಕಾರ್ಯಕ್ರಮಕ್ಕೆ ಒಳಗಾಗಿದ್ದಾರೆ.
ಡಿ.ಎಸ್.ಆರ್.ಟಿ, ಎನ್.ಸಿ.ಇ.ಆರ್.ಟಿ, ಮುಖ್ಯ ಶಿಕ್ಷಕರ ಸಂಘ ಪ್ರಾಥಮಿಕ ಶಿಕ್ಷಕರ ಸಂಘ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಇತರ ಓಉಔಗಳ ಮೂಲಕ ಪ್ರಾಥಮಿಕ ಮತ್ತು ಪ್ರೌಢ ಹಂತದ ಶಾಲಾ ಶಿಕ್ಷಕರಿಗೆ ಪುನಶ್ವೇತನ ತರಬೇತಿಗಳನ್ನು ನೀಡುವ ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿದೆ. ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳಲ್ಲಿಯೂ ಸಹ ನಮ್ಮ ಕಾಲೇಜಿನ ಅಧ್ಯಾಪಕರು ತೊಡಗಿಸಿಕಕೊಂಡಿದ್ದಾರೆ.
ವಿಜಯ ಶಿಕ್ಷಕರ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಧನೆ ಕಳೆದ 60 ವರ್ಷಗಳಲ್ಲಿ ಸತತವಾಗಿ ಉತ್ತಮವಾಗಿದ್ದು, ಸರಾಸರಿ 90% ಕ್ಕಿಂತ ಹೆಚ್ಚಿದೆ. ಮುಂದಿನ ಶೈಕ್ಷಣ ಕ ವರ್ಷದಿಂದ ಸೇವಾನಿರತ ಶಿಕ್ಷಕರಿಗೆ ಅಗತ್ಯ ಆಧಾರಿತ ಕೋರ್ಸ್‍ಗಳು ಮತ್ತು ಅಲ್ಪಾವಧಿಯ ಕೋರ್ಸ್‍ಗಳನ್ನು ಪ್ರಾರಂಭಿಸುವ ಪ್ರಸ್ತಾಪವನ್ನು ಕಾಲೇಜು ಹೊಂದಿದೆ.
ಕಾಲೇಜು ಯಶಸ್ವಿಯಾಗಿ ೫೦ ವರ್ಷಗಳನ್ನು ಮುಗಿಸಿ 2010-11ರಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದೆ.
ವಿಜಯ ಶಿಕ್ಷಕರ ಮಹಾವಿದ್ಯಾಲಯ ಪ್ರತಿಷ್ಡಿತ ಆಡಳಿತ ಮಂಡಳಿ ‘ಬಿ.ಹೆಚ್.ಎಸ್ ಉನ್ನತ ಶಿಕ್ಷಣ ಸಂಸ್ಥೆ, ಜಯನಗರ, ಬೆಂಗಳೂರು ನಡೆಸುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದೆ. ನಮ್ಮ ಶಿಕ್ಷಣ ಸಮಿತಿಯ 1942ರಿಂದ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಅಪಾರ ಅನುಭವವನ್ನು ಹೊಂದಿದೆ. “ಶಿಕ್ಷಣದಲ್ಲಿ ಶ್ರೇಷ್ಟತೆ” ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಸ್ತುತ ಬಿ.ಹೆಚ್.ಎಸ್.ಹೆಚ್.ಇ,ಎಸ್ ಆಡಳಿತ ಸಮಿತಿಯ ಬೆಂಗಳೂರು ನಗರದಲ್ಲಿ ಮತ್ತು ವೈಸೂರು ಬಳಿಯ ಟಿ.ನರಸೀಪುರದಲ್ಲಿ 17 ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಇದರಲ್ಲಿ ಐದು ಸಂಸ್ಥೆಗಳು ಸರ್ಕಾರಿ ಅನುದಾನಿತ ಮತ್ತು ಉಳಿದ ಸಂಸ್ಥೆಗಳು ಸ್ವ-ಹಣಕಾಸು ಸಂಸ್ಥೆಗಳು. ಸಂಸ್ಥೆಗಳನ್ನು ನಡೆಸುವಲ್ಲಿ ಆಡಳಿತ ಮಂಡಳಿಯು ಜಾತ್ಯತೀತ ದೃಷ್ಟಿಕೋನವನ್ನು ಹೊಂದಿದೆ. ಇದು ಎಲ್ಲಾ ಸಂಸ್ಥೆಗಳನ್ನು ಸಮಾಜದ ಎಲ್ಲಾ ವರ್ಗದವರಿಗೆ ಸೇವೆ ಸಲ್ಲಿಸುವಂತೆ ಮಾಡಿದೆ.
ವಿಜಯ ಶಿಕ್ಷಕರ ಕಾಲೇಜನ್ನು ಆಗಸ್ಟ್ 1960ರಲ್ಲಿ ಸ್ಥಾಪಿಸಲಾಯಿತು. ಇದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಶಾಶ್ವತ ಸಂಯೋಜನೆಯನ್ನು ಹೊಂದಿದೆ ಮತ್ತು ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ ಸಿ ಟಿ ಇ) ಕಾಲೇಜನ್ನು ಗುರುತಿಸಿದೆ. ಕಾಲೇಜು ವಿಶ್ವವಿದ್ಯಲಯ ಧನಸಹಾಯ ಆಯೋಗದಿಂದ ಗುರುತಿಸಲ್ಪಟ್ಟಿದ್ದು ಯುಜಿಸಿ ಮಾನದಂಡಗಳ ಪ್ರಕಾರ 12ಬಿ ಮತ್ತು 2 ಎಫ್ ಅಡಿಯಲ್ಲಿ ಪಟ್ಟಿ ಮಾಡಿದೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿಯ ಶಿಫಾರಸ್ಸುಗಳ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರವು 1997ರಲ್ಲಿ ನಮ್ಮ ಕಾಲೇಜನ್ನು ಶಿಕ್ಷಕರ ಶಿಕ್ಷಣ ಕಾಲೇಜು (ಸಿಟಿಇ) ಆಗಿ ನವೀಕರಿಸಿದೆ. ಈ ಕಾಲೇಜನ್ನು ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತ ಪರಿಷತ್ತು (ಎನ್ ಎ ಎ ಸಿ) ಮರು ಮಾನ್ಯತೆ ನೀಡಿದೆ.
ವಿಜಯ ಶಿಕ್ಷಕರ ಕಾಲೇಜು ಎರಡು ವರ್ಷದ ಬಿ.ಇಡಿ. ಮಾಧ್ಯಮಿಕ ಶಾಲಾ ಶಿಕ್ಷಕರು ಮತ್ತು ಶಿಕ್ಷಕ ಶಿಕ್ಷಕರಾಗಲು ಕಾರ್ಯಕ್ರಮ, ಕಲೆ, ವಿಜ್ಞಾನ, ವಾಣ ಜ್ಯ, ವ್ಯವಹಾರ ನಿರ್ವಹಣೆ, ಎಂಜಿನಿಯರಿಂಗ್ ಮುಂತಾದ ಪದವೀಧರರಿಗೆ ಸೇವಾಪೂರ್ವ ತರಬೇತಿ ಕೋರ್ಸ್‍ನ್ನು ನೀಡಲಾಗುತ್ತದೆ. ಕರ್ನಾಟಕದ ಕೇಂದ್ರೀಕೃತ ಪ್ರವೇಶ ಕೋಶದಿಂದ ಆಯ್ಕೆಯಾದ ಯಶಸ್ವಿ ಅಭ್ಯರ್ಥಿಗಳಿಗೆ 75 ಸ್ಥಾನಗಳನ್ನು ಸರ್ಕಾರ ನಿಗದಿಪಡಿಸಿದೆ ಮತ್ತು 25 ಸ್ಥಾನಗಳು ಆಡಳಿತ ಮಂಡಳಿಗೆ ಒಳಪಟ್ಟಿವೆ.
ನಮ್ಮ ಕಾಲೇಜಿನಲ್ಲಿ ಬಿ.ಇಡಿ ಸೇವಾಪೂರ್ವ ಮತ್ತು ಸೇವಾನಿರತ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ವಿಶಾಲವಾದ ಕಟ್ಟಡವಿದೆ. ಎನ್ ಸಿ ಟಿ ಇ ನಿಯಮಗಳ ಪ್ರಕಾರ ವಿಜಯ ಶಿಕ್ಷಕರ ಕಾಲೇಜು ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರದ ದಕ್ಷಿಣ ಭಾಗದ ಜಯನಗರ ೪ನೇ ಬಡಾವಣೆಯಲ್ಲಿದೆ.