ವಿಜಯ ಶಿಕ್ಷಕರ ಮಹಾವಿದ್ಯಾಲಯದಲ್ಲಿ ಅತಿಥಿಗಳಿಗೆ ಮತ್ತು ಹೊರಸ್ಥಳಗಳಿಂದ ಬರುವ ಸಂಪನ್ಮೂಲ ವ್ಯಕ್ತಿಗಳಿಗೆ ವಿಶ್ರಾಂತಿಗೊಳ್ಳಲು ಅತಿಥಿ ಕೊಠಡಿಗಳ ಸೌಲಭ್ಯವನ್ನು ಹೊಂದಿದೆ.
ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಿಡುವಿನ ವೇಳೆಯಲ್ಲಿ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿಗಳ ವ್ಯವಸ್ಥೆಯನ್ನು ಹೊಂದಿದೆ.
ಕಾಲೇಜಿನಲ್ಲಿ ಸುವ್ಯವಸ್ಥಿತವಾದ ಅಡುಗೆ ಮನೆಯನ್ನು ಒಳಗೊಂಡಿದೆ.
ಕಾಲೇಜಿನಲ್ಲಿ ಪ್ರಶಿಕ್ಷಕರಿಗೆ ಒಳಾಂಗಣ ಮತ್ತು ಹೊರಾಂಗಣ ಆಟಗಳಲ್ಲಿ ತಮ್ಮ ಕ್ರಿಡಾಕೌಶಲ್ಯವನ್ನು ಉತ್ಕೃಷ್ಠಗೊಳಿಸಿಕೊಳ್ಳಲು ಸುಸಜ್ಜಿತ ಕ್ರೀಡಾ ಕೊಠಡಿ ವ್ಯವಸ್ಥೆಯಿದೆ. ಪ್ರಶಿಕ್ಷಕರು ಮತ್ತು ವಿದ್ಯಾರ್ಥಿ ಶಿಕ್ಷಕರು ತಮ್ಮ ಒತ್ತಡವನ್ನು ಪರಿಹರಿಸಿಕೊಳ್ಳುವ ಸಲುವಾಗಿ, ಬಿಡುವಿನ ವೇಳೆಯಲ್ಲಿ ವಿವಿಧ ಒಳಾಂಗಣ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಸೂಕ್ತ ವ್ಯವಸ್ಥೆಯಿದೆ.
ಪ್ರಶಿಕ್ಷಣಾರ್ಥಿಗಳು ಶೈಕ್ಷಣಿಕ ಹಾಗೂ ವೈಯಕ್ತಿಕ ಒತ್ತಡಗಳಿಂದ ಹೊರಬರಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನವನ್ನು ಒದಗಿಸುವ ವ್ಯವಸ್ಥೆಯನ್ನು ವಿಜಯ ಶಿಕ್ಷಕರ ಮಹಾವಿದ್ಯಾಲಯವು ಒಳಗೊಂಡಿದೆ.