VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಮಾಹಿತಿ ಮತ್ತು ಸಂವಹನ ಸಂಪನ್ಮೂಲ ಕೇಂದ್ರ

ವಿಜಯ ಶಿಕ್ಷಕರ ಮಹಾವಿದ್ಯಾಲಯವು ಉತ್ತಮವಾದ ಗಣಯಂತ್ರ ಸಂಪನ್ಮೂಲ ಕೊಠಡಿಯನ್ನು ಹೊಂದಿದೆ. ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಒದಗಿಸುವುದರೊಂದಿಗೆ , ೨೧ನೇ ಶತಮಾನಕ್ಕೆ ಬೇಕಾದ ತಂತ್ರಜ್ಞಾನ ಆಧಾರಿತ ಶಿಕ್ಷಕರನ್ನು ರೂಪಿಸಲು ಅಗತ್ಯವಾದ ತರಬೇತಿಯನ್ನು ನೀಡುತ್ತಿದೆ. ಆಧುನಿಕ ಶಿಕ್ಷಣದ ಅಪೇಕ್ಷೆಯಂತೆ, ಕೇವಲ ವಿದ್ಯಾರ್ಥಿ ಶಿಕ್ಷರಿಗಷ್ಟೇ ಅಲ್ಲದೆ ಪ್ರಶಿಕ್ಷಕರುಗಳು ತಮ್ಮ ತಂತ್ರಜ್ಞಾನ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗುವಂಥ ಉತ್ತಮ ಮತ್ತು ಸುಸಜ್ಜಿತವಾದ ಗಣಕಯಂತ್ರ ವ್ಯವಸ್ಥೆಯನ್ನು ಹೊಂದಿದೆವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ವೃದ್ಧಿ ಮತ್ತು ಶಿಕ್ಷಕರ  ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ನಮ್ಮ ಕಾಲೇಜಿನ ಮಾಹಿತಿ ಮತ್ತು ಸಂವಹನ ಸಂಪನ್ಮೂಲ ಕೇಂದ್ರವು ಹೆಚ್ಚು ಸೌಲಭ್ಯವನ್ನು ಒದಗಿಸುತ್ತಿದೆ. ಯಾವುದೇ ಭೌಗೋಳಿಕ ಹಿನ್ನಲೆಯಿಂದ ಬಂದ ವಿದ್ಯಾರ್ಥಿಗಳಲ್ಲಿ ಬೇಧಭಾವವೆಣಿಸದೆ ಎಲ್ಲ ವಿದ್ಯಾರ್ಥಿಗಳನ್ನು ತಂತ್ರಜ್ಞಾನ ನುರಿತ ಶಿಕ್ಷಕರನ್ನಾಗಿಸುವತ್ತ ಪಣತೊಟ್ಟು ಮಾಹಿತಿ ಮತ್ತು ಸಂವಹನ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ನಮ್ಮ ಕಾಲೇಜಿನ ಮಾಹಿತಿ ಮತ್ತು ಸಂವಹನ ಸಂಪನ್ಮೂಲ ಕೇಂದ್ರವು ಹೊಂದಿರುವ ಸೌಲಭ್ಯಗಳೆಂದರೆ:

  • ಒಟ್ಟು ೪೭ ಗಣಕಯಂತ್ರಗಳನ್ನು ಹೊಂದಿದೆ.
  • ವಿಂಡೋಸ್ (೧೪ ಯಂತ್ರಗಳು) ಮತ್ತು ಮುಕ್ತ ತಂತ್ರಂಶವನ್ನು ಹೊಂದಿರುವ ಉಬಂಟು ೨೦.೦೨ (೩೩ ಗಣಕಯಂತ್ರ)ಗಳನ್ನು ಹೊಂದಿದೆ.
  • ವಿದ್ಯಾರ್ಥಿ ಮತ್ತು ಶಿಕ್ಷಕರ ಹೆಚ್ಚಿನ ಅನುಕೂಲಕ್ಕಾಗಿ ೦೫ ಲಾಪ್ಟಾಪ್ ವ್ಯವಸ್ಥೆಯಿದೆ.
  • ಗಣಕಯಂತ್ರಗಳ ನಿರ್ದಿಷ್ಟತೆಗಳೆಂದರೆ 
    • ೧೮ ಗಣಕಯಂತ್ರಗಳು ಹೆಚ್.ಪಿ ಪೆವಿಲಿಯನ್ ಕೋರ್ ಐ೫ ಜಿಬಿ ಆರ್..ಎಂ, ೫೦೦ ಹೆಚ್.ಡಿ.ಡಿ, ೧ಜಿಬಿ ಗ್ರಾಫಿಕ್ಸ್ 
    • ೧೫ ಗಣಕಯಂತ್ರಗಳು ಡೆಲ್ ಕೋರ್ ಐ೩೪ಜಿಬಿ ಆರ್..ಎಂ೫೦೦ಜಿಬಿ ಹೆಚ್.ಡಿ.ಡಿ
  • ಡೆಲ್, ಹಿಟಾಚಿ ಮತ್ತು ಎನ್..ಸಿ ಕಂಪೆನಿಗಳ್ ಒಟ್ಟು ೦೭ ಪ್ರೊಜೆಕ್ಟರ್ ಗಳ ವ್ಯವಸ್ಥೆಯಿದೆ.
  • ವೈಫೈ ಮತ್ತು ರೋಟರ್ಸ್ ೦೪
  • ೧೦೦ ಎಂ.ಬಿ.ಪಿ.ಎಸ್ ವೇಗದ ಅಂತರ್ಜಾಲದ ವ್ಯವಸ್ಥೆಯಿದೆ.

Enquire Us