ಪ್ರಸ್ತುತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು VTC ಯ ಹೃದಯವಾಗಿದೆ, ಸಂಶೋಧನಾ ಸಹಾಯ, ಓದುವಿಕೆ, ಕಲಿಕೆ ಮತ್ತು ಶೈಕ್ಷಣಿಕ ಸಂಪನ್ಮೂಲಗಳಿಗಾಗಿ ಆದರ್ಶ ಪರಿಸರವನ್ನು ಒದಗಿಸುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮತ್ತು ಬೋಧನಾ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಶಿಕ್ಷಕರು ಮತ್ತು ವಿದ್ಯಾರ್ಥಿ ಶಿಕ್ಷಕರ ಬಳಕೆಗೆ ಮುಕ್ತವಾಗಿದೆ.
ಪ್ರಸ್ತುತ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಸುಸಜ್ಜಿತ ಸೌಲಭ್ಯಗಳಿಂದ ಕೂಡಿದ್ದು, ಸಂಶೋಧನಾ ಪುಸ್ತಕಗಳು, ಪಠ್ಯಪುಸ್ತಕಗಳು, ಶೈಕ್ಷಣಿಕ ನಿಯತಕಾಲಿಕೆಗಳು ಮತ್ತು ವೆಬ್–ಸಂಪನ್ಮೂಲಗಳ ಸಮೃದ್ಧ ಸಂಗ್ರಹದ ತೆರೆದ ವ್ಯವಸ್ಥೆಯನ್ನು ಹೊಂದಿದೆ. ವಿಶಾಲವಾದ ಓದುಗ ಕೊಠಡಿಯನ್ನು ಹೊಂದಿದ್ದು ಒಟ್ಟಿಗೆ ೪೦ ರಿಂದ ೫೦ ವಿದ್ಯಾರ್ಥಿಗಳು ಕುಳಿತು ಓದುವ ವ್ಯವಸ್ಥೆಯನ್ನು ಹೊಂದಿದೆ. ಪತ್ರಿಕೆಗಳ ಓದಿಗಾಗಿ ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಸ್ತುತ ಇದು 18620 ಸಂಪುಟಗಳನ್ನು ಒಳಗೊಂಡಿದೆ, ಇದರಲ್ಲಿ ವಿಶ್ವಕೋಶಗಳು, ನಿಘಂಟುಗಳು, ಗೆಜೆಟಿಯರ್ಸ್ ವರ್ಷದ ಪುಸ್ತಕಗಳು ಸೇರಿವೆ. ಸಿಡಿ ‘ಗಳು, ಡಿವಿಡಿ ಮತ್ತು ವೀಡಿಯೊ ಕ್ಯಾಸೆಟ್ಗಳು, 20 ಕ್ಕೂ ಹೆಚ್ಚು ಶೈಕ್ಷಣಿಕ ನಿಯತಕಾಲಿಕೆಗಳು ಮತ್ತು 06 ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳನ್ನು ಒದಗಿಸುತ್ತದೆ
INFLIBNET-NLIST
Open Access E- Journals
Library Books available as on Today | ||
---|---|---|
Date: 30-Dec-19 11:02:01 AM | ||
Category | No of Volumes | |
1 | B.ED Books | 14996 |
2 | Book Bank | 327 |
3 | Donated Books | 819 |
4 | M.ED Books | 1247 |
5 | S.Series | 144 |
6 | SC/ST Books | 403 |
7 | D.Ed Books | 713 |
Total | 18649 | |
Journals/Magazines(2019-2020) | 20 |