VIJAYA TEACHERS COLLEGE
College of Teacher Education
ವಿಜಯ ಶಿಕ್ಷಕರ ಮಹಾವಿದ್ಯಾಲಯ
ಪ್ರಶಿಕ್ಷಣ ಕಾಲೇಜು

ಪ್ರಾಚಾರ್ಯರ ಸಂದೇಶ

ಶೈಕ್ಷಣಿಕವಾಗಿ ಮತ್ತು ಸಾಂಸ್ಥಿಕವಾಗಿ ನಾವು ಅದ್ಭುತ ವರ್ಷವನ್ನು ಹೊಂದಿದ್ದೇವೆ ಎಂಬುದನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. 

ಪ್ರತಿ ವರ್ಷವೂ ಹೊಸ ಅರ್ಥ ಮತ್ತು ಸಂದೇಶವನ್ನು ತರುತ್ತಿದ್ದು. ನಾವು ಮತ್ತಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ತೇಜಿಸುತ್ತಿದೆ. ಯುವಪೀಳಿಗೆಯ ಕಲಿಕೆಯಲ್ಲಿ, ಕರ್ತವ್ಯದಲ್ಲಿ ಮತ್ತು ಜೀವನದಲ್ಲಿ ಉತ್ತಮ ಗುಣಮಟ್ಟವನ್ನು ಸಾಧಿಸುವಲ್ಲಿ ಶ್ರಮಿಸುವುದು ನಮ್ಮ ಸಂಸ್ಥೆಗೆ ಹಾಗೂ ಒಟ್ಟಾರೆ ಸಮಾಜಕ್ಕೆ ನಮ್ಮ ಬದ್ಧತೆಯಾಗಿದೆ. ಸ್ಪರ್ಧೆ ಮತ್ತು ಪೈಪೋಟಿಗಳು ಯುವ ಪೀಳಿಗೆಯ ಜೀವನದ ಪ್ರತಿ ಹಂತದಲ್ಲೂ ಆವರಿಸಿಗೊಂಡಿದೆ ಹಾಗಾಗಿ ತಮ್ಮ ಕಾರ್ಯಗಳು ಮತ್ತು ಭಾವನೆಗಳ ಜೀವನದ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಅವರಿಗೆ ತಿಳಿಹೇಳಿ ಮಾರ್ಗದರ್ಶನ ನೀಡುವುದು ಜವಾಬ್ದಾರಿಯುತ ವ್ಯಕ್ತಿಗಳಾಗಿ ನಮ್ಮ ಕರ್ತವ್ಯವಾಗಿದೆ. ಈ ಮಾರ್ಗದರ್ಶನವು ಅವರಿಗೆ ತಮ್ಮ ಕುಟುಂಬ ಮತ್ತು ಜೌದ್ಯೋಗಿಕ ಜೀವನದಲ್ಲಿ ಆರೋಗ್ಯಕರ ಸಂಸ್ಕೃತಿಯನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಸಾಂಪ್ರದಾಯಕ ಮತ್ತು ಶೈಕ್ಷಣಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ನಾವು ಉನ್ನತ ನೈತಿಕ ಮೌಲ್ಯಗಳನ್ನು ಹೊಂದಿಸಬೇಕಾಗಿದೆ. ನಮ್ಮ ಸುತ್ತಲೂ ನಡೆಯುತ್ತಿರುವ ಬದಲಾವಣೆಗಳು ಮತ್ತು ಪ್ರಗತಿಯ ಬಗ್ಗೆ ತಿಳಿದುಕೊಂಡು ನಮ್ಮನ್ನು ನಾವು ಸರಿಯಾದ ದಿಕ್ಕಿನತ್ತ ಹೊಂದಿಸಿಕೊಳ್ಳಬೇಕಾಗಿದೆ. 

ಯುವ ಮನಸ್ಸುಗಳಲ್ಲಿ ಮಾನವ ಮತ್ತು ಮಾನವೀಯತೆಯ ಕಡೆಗೆ ಈ ಬದಲಾವಣೆಗಳನ್ನು ಪ್ರಾರಂಭಿಸುವ ಸಾಮರ್ಥ್ಯ ಶಿಕ್ಷಕರಲ್ಲಿ ಇದೆ. ಸಾಮರಸ್ಯ ಮತ್ತು ಶಾಂತಿಯುತ ಜಗತ್ತನ್ನು ನಿರ್ಮಿಸಲು ಸಮಾಜಕ್ಕೆ ಮಾನವೀಯ ಮತ್ತು ಪ್ರತಿಫಲಿತ ಶಿಕ್ಷಕರನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ನಮ್ಮ ಕೊಡುಗೆ ನೀಡುತ್ತೇವೆ. 

Enquire Us