ಸಮನ್ವಯತೆಯ ಅಭಿವೃದ್ಧಿ ಮತ್ತು ಸಮನ್ವಯ ಶಿಕ್ಷಣದ ರಾಷ್ಟ್ರೀಯ ಸಂಪನ್ಮೂಲ ಕೇಂದ್ರ
ಸಮನ್ವಯತೆಯ ಅಭಿವೃದ್ಧಿ ಮೂಲಕ ಸಮನ್ವಯ ಸಮಾಜವನ್ನು ಸೃಷ್ಠಿಸುವ ನಿಟ್ಟಿನಲ್ಲಿ ಭಾರತ ಕಾರ್ಯಾನ್ಮುಖವಾಗಿದೆ. ಇದರಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮತ್ತು ಸಮಗ್ರ ಸಮನ್ವಯತೆಯ ಅಭಿವೃದ್ಧಿಯ ಫಲವನ್ನು ಅನುಭವಿಸುವಂತೆ ಮಾಡುವ ಗುರಿಯನ್ನು ಹೊಂದಿದೆ. ರಾಷ್ಟ್ರೀಯ ನೀತಿಯ ವಿಶೇಷ ಚೇತನ ವ್ಯಕ್ತಿಗಳನ್ನು ದೇಶದ ಸಂಪನ್ಮೂಲಗಳೆಂದು ಗುರುತಿಸಿದ್ದು, ಅವರಿಗೆ ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಸಾಮಾಜಿಕ ಭಾಗವಹಿಸುವಿಕೆಯ ವಾತಾವರಣವನ್ನು ಸೃಷ್ಟಿಸಲು ಸೂಚಿಸಿದೆ. ಹಾಗೆಯೇ ಭಾರತದ 11 ಮತ್ತು 12ನೇ ವಾರ್ಷಿಕ ಯೋಜನೆಯು ಸಹ ವಿಶೇಷ ಚೇತನ ವಿದ್ಯಾರ್ಥಿಗಳಿಗೆ, ಅವಕಾಶ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ವಿಶ್ವವಿದ್ಯಾನಿಲಯಗಳು ಮತ್ತು ಸಂಯೋಜಿತ ಕಾಲೇಜುಗಳ ಪಾತ್ರವನ್ನು ಎತ್ತಿ ತೋರಿಸುತ್ತದೆ.
ಈ ನಿಟ್ಟಿನಲ್ಲಿ ವಿಜಯ ಶಿಕ್ಷಕರ ಮಹಾವಿದ್ಯಾಲಯವು ದಕ್ಷಿಣ ಏಷ್ಯಾದಲ್ಲಿ ಹೆಸರುವಾಸಿಯಾಗಿರುವ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಮನ್ವಯ/ಸಂಯೋಜಿತ ಶಿಕ್ಷಣದ ರುವರಿಯಾಗಿ ಕಾರ್ಯನಿರ್ವಹಿಸುತ್ತಿರುವ CBR Network ಸಂಸ್ಥೆಯ ಸಹಯೋಗದೊಂದಿಗೆ, ಸಮನ್ವಯತೆಯ ಅಭಿವೃದ್ಧಿ ಮತ್ತು ಸಮನ್ವಯ ಶಿಕ್ಷಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿದೆ. ಈ ಸಂಪನ್ಮೂಲ ಕೇಂದ್ರವು ಡಿಜಿಟಲ್/ಅಂಕೀಯ ಗ್ರಂಥಾಲಯ, ವರ್ಚುವಲ್ ತರಗತಿ ಉಪನ್ಯಾಸದ ಸಿಡಿಗಳು ಸಮನ್ವಯ ಶಿಕ್ಷಣದ ಬಹುಮಾಧ್ಯಮ ಕಲಿಕಾ ಸಾಮಾಗ್ರಿಗಳನ್ನು ಹೊಂದಿದೆ. ನಿಯತಕಾಲಿಕಗಳು ಮತ್ತು ಇ-ಕಲಿಕಾ ಸಾಮಗ್ರಿಗಳೊಂದಿಗೆ ಸುಸಜ್ಜಿತವಾಗಿದೆ.
ಉದ್ದೇಶಗಳು
ನಮ್ಮ ಸಂಪನ್ಮೂಲ ಕೇಂದ್ರದ ಕಾರ್ಯಗಳು/ಸಾಧನೆ